hetta tAyi taMdegaLa cittava nOyisi - An incredible song by Sri Purandara Dasaru

An incredible song by Sri Purandara Dasaru

(so appropriate in this day and age)

ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ

ನಿತ್ಯ ದಾನವ ಮಾಡಿ ಫಲವೇನು

ಸತ್ಯ ಸದಾಚಾರ ಇಲ್ಲದವನು

ಜಪ ಹತ್ತುಸಾವಿರ ಮಾಡಿ ಫಲವೇನು

ತನ್ನ ಸತಿ ಸುತರು ಬಂಧುಗಳ ನೋಯಿಸಿ

ಚಿನ್ನ ದಾನವ ಮಾಡಿ ಫಲವೇನು

ಬಿನ್ನಾಳದಿಂದಲಿ ದೇಶ ದೇಶವ ತಿರುಗಿ

ಅನ್ನ ದಾನವ ಮಾಡಿ ಫಲವೇನು

ಗೋಪ್ಯ ಗುಣ ಗುಟ್ಟು ಇಲ್ಲದ ಹೆಣ್ಣಿಗೆ

ರೂಪ ಯೌವನವಿದ್ದು ಫಲವೇನು

ತಾಪತ್ರಯದಿ ಸಂಸಾರ ಕೆಡಿಸುವಂಥ

ಪಾಪಿ ಮಗನು ಇದ್ದು ಫಲವೇನು

ತುಂಡು ಧನದಿಂದ ತಂದೆ ಮಾತು ಕೇಳದ

ತೊಂಡ ಮಗನು ಇದ್ದು ಫಲವೇನು

ಭಂಡು ಮಾಡಿ ಅತ್ತೆ ಮಾವನ ಬೈವ

ಪುಂಡು ಸೋಸೆಯಿದ್ದು ಫಲವೇನು

ಸ್ನಾನಕ್ಕೆ ಪಾನಕ್ಕೆ ಆಗುವ ತಿಳಿ ನೀರು

ಕಾನನ ದೊಳಗಿದ್ದು ಫಲವೇನು

ಆನಂದ ಮೂರುತಿ ಪುರಂದರ ವಿಠ್ಠಲನ

ನೆನೆಯದ ತನುವಿದ್ದು ಫಲವೇನು

(ಶ್ರೀ ಪುರಂದರ ದಾಸರು)


हॆत्त तायि तंदॆगळ चित्तव नोयिसि

नित्य दानव माडि फलवेनु

सत्य सदाचार इल्लदवनु

जप हत्तुसाविर माडि फलवेनु

तन्न सति सुतरु बंधुगळ नोयिसि

चिन्न दानव माडि फलवेनु

बिन्नाळदिंदलि देश देशव तिरुगि

अन्न दानव माडि फलवेनु

गोप्य गुण गुट्टु इल्लद हॆण्णिगॆ

रूप यौवनविद्दु फलवेनु

तापत्रयदि संसार कॆडिसुवंथ

पापि मगनु इद्दु फलवेनु

तुंडु धनदिंद तंदॆ मातु केळद

तॊंड मगनु इद्दु फलवेनु

भंडु माडि अत्तॆ मावन बैव

पुंडु सोसॆयिद्दु फलवेनु

स्नानक्कॆ पानक्कॆ आगुव तिळि नीरु

कानन दॊळगिद्दु फलवेनु

आनंद मूरुति पुरंदर विठ्ठलन

नॆनॆयद तनुविद्दु फलवेनु

(श्री पुरंदर दासरु)

hetta tAyi taMdegaLa cittava nOyisi

nitya dAnava mADi phalavEnu

satya sadAcAra illadavanu

japa hattu sAvira mADi PalavEnu

tanna sati sutaru baMdhugaLa nOyisi

cinna dAnava mADi phalavEnu

binnANadiMdali dEsha dEshava tirugi

anna dAnava mADi phalavEnu

gOpya guNa guTTu illada heNNige

rUpa yauvanaviddu phalavEnu

tApatrayadi saMsAra keDisuvaMtha

pApi maganu iddu phalavEnu

tuMDu dhanadiMda taMde mAtu kELada

toMDa maganu iddu phalavEnu

bhaMDu mADi atte mAvana baiva

puMDu soseyiddu phalavEnu

snAnakke pAnakke Aguva tiLinIru

kAnana doLagiddu phalavEnu

AnaMda mUruti puraMdara viThThalana

neneyada tanuviddu phalavEnu

(Sri PurandaraDasaru)

 

Comments