Posts

Showing posts from 2023

Sri VijayaDasara Kavacha

Image
 Sri VijayaDasara Kavacha ವಿಜಯದಾಸರ ಕವಚ – ಸ್ಮರಿಸಿ ಬದುಕಿರೋ ದಿವ್ಯಚರಣಕೆರಗಿರೊ ದುರಿತ ತರಿದು ಪೊರೆವ ವಿಜಯಗುರುಗಳೆಂಬರ || ಪ || ದಾಸರಾಯನ ದಯವ ಸೂಸಿಪಡೆದನ ದೋಷರಹಿತನ ಸಂತೋಷಭರಿತನ || ೧ || ಜ್ಞಾನವಂತನ ಬಲುನಿಧಾನಿ ಶಾಂತನ ಮಾನವಂತನ ಬಲುವದಾನ್ಯ ದಾಂತನ || ೨ || ಹರಿಯ ಭಜಿಸುವ ನರಹರಿಯ ಯಜಿಸುವ ದುರಿತ ತ್ಯಜಿಸುವ ಜನಕೆ ಹರುಷಸುರಿಸುವ || ೩ || ಮೋದಭರಿತನ ಪಂಚಭೇದವರಿತನ ಸಾಧುಚರಿತನ ಮನವಿಷಾದಮರೆತನ || ೪ || ಇವರ ನಂಬಿದ ಜನಕೆ ಭವವಿದೆಂಬುದು ಹವಣವಾಗದೋ ನಮ್ಮವರ ಮತವಿದು || ೫ || ಪಾಪಕೋಟಿಯ ರಾಶಿ ಲೇಪವಾಗದೊ ತಾಪಕಳೆವನೋ ಬಲುದಯಾಪಯೋನಿಧಿ || ೬ || ಕವನರೂಪದಿ ಹರಿಯ ಸ್ತವನಮಾಡಿದ ಭುವನ ಬೇಡಿದ ಮಾಧವನ ನೋಡಿದ || ೭ || ರಂಗನೆಂದನ ಭವವು ಹಿಂಗಿತೆಂದನ ಮಂಗಳಾಂಗನ ಅಂತರಂಗವರಿತನ || ೮ || ಕಾಶಿನಗರದಲ್ಲಿದ್ದ ವ್ಯಾಸದೇವನ ದಯವ ಸೂಸಿಪಡೆದನ ಉಲ್ಲಾಸತನದಲಿ || ೯ || ಚಿಂತೆ ಬ್ಯಾಡಿರೊ ನಿಶ್ಚಿಂತರಾಗಿರೊ ಶಾಂತ ಗುರುಗಳ ಪಾದವಂತು ನಂಬಿರೋ || ೧೦ || ಖೇದವಾಗದೊ ನಿಮಗೆ ಮೋದವಾಹುದೊ ಆದಿದೇವನ ಸುಪ್ರಸಾದವಾಹುದೊ || ೧೧ || ತಾಪ ತಡೆವನೊ ಬಂದ ಪಾಪ ಕಡಿವನೊ ಶ್ರೀಪತಿಯಪಾದ ಸಮೀಪವಿಡುವನೋ || ೧೨ || ಗಂಗೆ ಮಿಂದರೆ ಮಲವು ಹಿಂಗಿತಲ್ಲದೆ ರಂಗನೊಲಿಯನೊ ಭಕ್ತಸಂಗದೊರೆಯದೇ || ೧೩ || ವೇದ ಓದಲು ಬರಿದೆ ವಾದಮಾಡಲು ಹಾದಿಯಾಗದೊ ಬುಧರ ಪಾದ ನಂಬದೆ || ೧೪ || ಲೆಕ್ಕವಿಲ್ಲದಾ ದೇಶ ತುಕ್ಕಿಬಂದರು ದುಃಖವಲ್ಲದೆ ಲೇಶ ಭಕುತಿ ದೊರೆಯದೊ || ೧೫ || ದಾ...

Sri Karthika Damodara Stothram

Image
ಶ್ರೀದಾಮೋದರಸ್ತೋತ್ರಮ್ ಮತ್ಸ್ಯಾಕೃತಿಧರ ಜಯ ದೇವೇಶ ವೇದವಿಬೋಧಕ ಕೂರ್ಮಸ್ವರೂಪ ಮಂದರಗಿರಿಧರ ಸೂಕರರೂಪ ಭೂಮಿವಿಧಾರಕ ಜಯ ದೇವೇಶ (೧)   ಕಾಂಚನಲೋಚನ ನರಹರಿರೂಪ ದುಷ್ಟಹಿರಣ್ಯಕಭಂಜನ ಜಯ ಭೋ ಜಯ ಜಯ ವಾಮನ ಬಲಿವಿಧ್ವಂಸಿನ್ ದುಷ್ಟಕುಲಾಂತಕ ಭಾರ್ಗವರೂಪ (೨)   ಜಯ ವಿಶ್ರವಸಃಸುತವಿಧ್ವಂಸಿನ್ ಜಯ ಕಂಸಾರೇ ಯದುಕುಲತಿಲಕ ಜಯ ವೃಂದಾವನಚರ ದೇವೇಶ ದೇವಕಿನಂದ ನಂದಕುಮಾರ (೩)   ಜಯ ಗೋವರ್ಧನಧರ ವತ್ಸಾರೇ ಧೇನುಕಭಂಜನ ಜಯ ಕಂಸಾರೇ ರುಕ್ಮಿಣಿನಾಯಕ ಜಯ ಗೋವಿಂದ ಸತ್ಯಾವಲ್ಲಭ ಪಾಂಡವಬಂಧೋ (೪)   ಖಗವರವಾಹನ ಜಯ ಪೀಠಾರೇ ಜಯ ಮುರಭಂಜನ ಪಾರ್ಥಸಖೇತ್ವಮ್ ಭೌಮವಿನಾಶಕ ದುರ್ಜನಹಾರಿನ್ ಸಜ್ಜನಪಾಲಕ ಜಯ ದೇವೇಶ (೫)   ಶುಭಗುಣಗನಪೂರಿತ ವಿಶ್ವೇಶ ಜಯ ಪುರುಷೋತ್ತಮ ನಿತ್ಯವಿಬೋಧ ಭೂಮಿ ಧರಾಂತಕಕಾರಣರೂಪ ಜಯ ಖರಭಂಜನ ದೇವವರೇಣ್ಯ (೬)   ವಿಧಿಭವಮುಖಸುರಸತತಸುವಂದಿತಸಚ್ಚರಣಾಂಬುಜ ಕಂಜಸುನೇತ್ರ ಸಕಲಸುರಾಸುರನಿಗ್ರಹಕಾರಿನ್ ಪೂತನಿವಾರಣ ಜಯ ದೇವೇಶ (೭)   ಯದ್ಭ್ರೂವಿಭ್ರಮಮಾತ್ರಾತ್ತದಿದಮಾಕಮಲಾಸನಶಂಭುವಿಪಾದ್ಯಮ್ ಸೃಷ್ಟಿಸ್ಥಿತಿಲಯಮೃಚ್ಛತಿ ಸರ್ವಂ ಸ್ಥಿರಚರವಲ್ಲಭ ಸ ತ್ವಂ ಜಯ ಭೋ (೮)   ಜಯಯಮಲಾರ್ಜುನಭಂಜನಮೂರ್ತೇ ಜಯ ಗೋಪೀಕುಚಕುಂಕುಮಾಂಕಿತಾಂಗ ಪಾಂಚಾಲೀಪರಿಪಾಲನ ಜಯ ಭೋ ಜಯ ಗೋಪೀಜನರಂಜನ ಜಯ ಭೋ (೯)   ಜಯ ರಾಸೋತ್ಸವರತ ಲಕ್ಶ್ಮೀಶ ಸತತಸು...