Posts

Showing posts with the label SreepaadaRajaru

MADHVANAAMA (SriPaadaRaaja Virachita)

Image
Sri MadHvanaAma- ಮಧ್ವನಾಮ (ಶ್ರೀಪಾದರಾಜ ವಿರಚಿತ) (composed by Sri SreEpaAdaRaAjaru) https://archive.org/details/madhva-naama-sri-paada-rayaru MadhvaNaAma is one of the most popular works of shrIpAdarAjaRu. A Kannada poem extolling VaAyu dEvaru and his three incarnations. It follows the structure of shri hari-vAyu stuti and was composed by shrIpAdarAjaru for the benefit of those who don't know Sanskrit and/or are not allowed to recite the VaAyu-stuti. Phala-Stuthi for this great work was written by Sri Jagannatha Dasaru adding glory to its greatness and value. #ಮಧ್ವನಾಮ ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ ಅಖಿಲಗುಣ ಸದ್ಧಾಮ ಮಧ್ವನಾಮ || ಪ || ಆವ ಕಚ್ಛಪ ರೂಪದಿಂದಲಂಡೋದಕವ ಓವಿ ಧರಿಸಿದ ಶೇಷಮೂರುತಿಯನು ಆವವನ ಬಳಿವಿಡಿದು ಹರಿಯ ಸುರರೈಯ್ದುವರು ಆ ವಾಯು ನಮ್ಮ ಕುಲಗುರುರಾಯನು || ೧ || ಆವವನು ದೇಹದೊಳಗಿರಲು ಹರಿ ನೆಲಸಿಹನು ಆವವನು ತೊಲಗೆ ಹರಿ ತಾ ತೊಲಗುವ ಆವವನು ದೇಹದಾ ಒಳ ಹೊರಗೆ ನಿಯಾಮಕನು ಆ ವಾಯು ನಮ್ಮ ಕುಲಗುರುರಾಯನು || ೨ || ಕರುಣಾಭಿಮಾನಿ ಸುರರು ದೇಹವ ಬಿಡಲು ಕುರುಡ ಕಿವುಡ ಮೂಕನೆಂದೆನಿಸುವ ಪರಮ ಮುಖ್ಯ ಪ್ರಾಣ ತೊಲಗಲಾ ದೇಹವನು ಅರಿತು ಪೆಣನೆಂದು ಪೇಳುವರು ಬುಧಜನ || ೩ || ಸುರರೊಳಗ...